ಕ್ಯಾರೆಟ್ ನಲ್ಲಿರುವ 10 ಆರೋಗ್ಯಕಾರಿ ಅಂಶಗಳು

 

ಕ್ಯಾರೆಟ್ ಸಸ್ಯಾಹಾರಿ ಆಹಾರಗಳು ಒಂದು ಪ್ರಮುಖ ಭಾಗವಾಗಿದೆ.  ಯಾರು ತಾಜಾ ಮತ್ತು ಸಿಹಿ ಕ್ಯಾರೆಟ್ ಮೇಲೆ ಪ್ರೀತಿ ಇಲ್ಲ ಹೇಳ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಸೇವಿಸಬಹುದಾದ ಆರೋಗ್ಯಕ್ಕೆ ನೆರವಾಗುವ ತರಕಾರಿಗಳಲ್ಲಿ ಕ್ಯಾರೆಟ್ ಅನ್ನು ಕಡೆಗಣಿಸುವಂತಿಲ್ಲ.

 

-:ಕ್ಯಾರೆಟ್ ನಲ್ಲಿರುವ 10 ಆರೋಗ್ಯ ಅಂಶಗಳು:-

*ಕ್ಯಾರೆಟ್‌ನ್ನು ಬೇಯಿಸಿ ತಿಂದರೆ ವಿಟಮಿನ್ ಎ ದೊರೆತ್ತದೆ ಹಾಗೆ, ಹಸಿಯಾಗಿ ತಿಂದರೆ ದೈಹಿಕ ಶಕ್ತಿ ಹೆಚ್ಚುತ್ತದೆ.

*ನೈಸರ್ಗಿಕವಾಗಿ ಮುಖದ ಸೌಂದರ್ಯ ಹೆಚ್ಚಿಸಬೇಕಾದರೆ ಸಮಯ ಇರೋಲ್ಲ ಅನ್ನೋದು ಕೆಲವರ ವಾದ. ಆದರೆ,
ಇರುವ ಸಮಯದಲ್ಲಿ ನೈಸರ್ಗಿಕ ಆಹಾರ ಸೇವಿಸಿ ತಮ್ಮ ದೇಹದ ಸೌಂದರ್ಯ ಹೆಚ್ಚಿಸಕೊಳ್ಳಬಹುದು.

*ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ.

*ಕ್ಯಾರೆಟ್‌ನಿಂದ ವಯಸ್ಸಾಗುವಿಕೆಯಿಂದ ದೇಹದ ಮೇಲೆ ಆಗುವಂತಹ ಪರಿಣಾಮಗಳನ್ನು ನಿಯಂತ್ರಿಸಬಹುದು. ಅದರಲ್ಲಿರುವ ಬೀಟಾ-ಕ್ಯಾರೊಟೀನ್ ಎಂಬ ಉತ್ಕರ್ಷಣ ನಿರೋಧಕ ಸತ್ವವು ಫ್ರೀ ರಾಡಿಕಲ್ಸ್ ಜೊತೆಗೆ ಹೋರಾಡುತ್ತವೆ

* ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು

*ಇದರಿಂದ ಕಣ್ಣು ದೃಷ್ಟಿ ಚುರುಕಾಗುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಮತ್ತು ಹಲ್ಲನ್ನು ಗಟ್ಟಿಗೊಳಿಸುತ್ತದೆ.

*ಕ್ಯಾರೆಟ್ ಜೊತೆ ಪಾಲಾಕ್ ಮತ್ತು ಬೀಟ್ ರೂಟ್ ಸೇರಿಸಿ ಬೆಳಗ್ಗಿನ ಸಮಯ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯದ ಕುರಿತು ಚಿಂತಿಸುವ ಅಗತ್ಯವೇ ಇರುವುದಿಲ್ಲ.

*ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮತ್ತು ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆ ಆಗಲು ಇದು ಸಹಕಾರಿ.
ಕ್ಯಾರೆಟ್ ಜ್ಯೂಸ್ ನಲ್ಲಿ ಉರಿ ನಿವಾರಕ ಅಂಶ, ಕ್ಯಾನ್ಸರ್ ನಿವಾರಿಸುವ ಅಂಶವಿದೆ. ಕ್ಯಾರೆಟ್ ಜ್ಯೂಸ್
ಸೇವನೆಯಿಂದ ಒತ್ತಡ ಕಡಿಮೆಯಾಗುವುದಲ್ಲದೆ ಜೀರ್ಣಕ್ರಿಯೆಯೂ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

* ಕ್ಯಾರೆಟನ್ನು ನೈಸರ್ಗಿಕ ವಿಟಮಿನ್ ಮತ್ತು ಪೋಷಕಾಂಶ ಹೊಂದಿರುವ ಚಿನ್ನದ ಗಣಿ ಎಂದೇ ಹೇಳಲಾಗಿದೆ. ಕ್ಯಾರೆಟ್ ಜ್ಯೂಸ್ ಕುಡಿದರೆ ಕೇವಲ ಆರೋಗ್ಯ ಮಾತ್ರವಲ್ಲ, ಸೌಂದರ್ಯವೂ ಹೆಚ್ಚುತ್ತದೆ.

*ಕ್ಯಾರೆಟ್ ಅನ್ನು ಹೆಚ್ಚು ಸೇವಿಸಿದರೆ ದಂತದ ಆರೋಗ್ಯ ಹೆಚ್ಚಲಿದ್ದು, ಹಲ್ಲುಗಳು ಕಾಂತಿಯುತವಾಗುತ್ತವೆ.
ಕ್ಯಾರೆಟ್ ಅನ್ನು ಹಸಿಯಾಗಿ ಕಚ್ಚುತ್ತಾ ಸೇವಿಸಿದರೆ ಸಲೈವಾ ಅಂಶವು ಹೆಚ್ಚು ಉತ್ಪತ್ತಿಯಾಗಿ ಆಮ್ಲದ ಪ್ರಮಾಣವನ್ನು ಸಮತೋಲನದಲ್ಲಿರಿಸುವುದಲ್ಲದೇ ಹಾನಿಯುಂಟಾಗುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ.