ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಹತ್ತು ಲಾಭಗಳು

 

ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿದಿದೆಯಾ? ಬೆಳಿಗ್ಗೆ ಬೆಡ್ ಕಾಫಿ-ಚಹಾ ಕುಡಿಯುವುದರ ಬದಲು ನೀರು ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದಾಗಿದೆ. ಏಕೆಂದರೆ ನಮ್ಮ ಹೆಚ್ಚಿನ ರೋಗಗಳ ಹೊಟ್ಟೆಯಿಂದಲೇ ಆರಂಭವಾಗುತ್ತದೆ. ನಮ್ಮ ದೇಹ ಶೇಕಡಾ 75 ರಷ್ಟು ಭಾಗ ನೀರಿನಿಂದ ಸಮತೋಲನ ಗೊಂಡಿರಬೇಕು. ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದ-ನಾಲ್ಕು ಲೋಟ ನೀರು ಸೇವನೆ ಮಾಡಬೇಕು ಇದ ರಿಂದ  ದುರುಕುವ ಆರೋಗ್ಯಕರ ಲಾಭಗಳು ಏನುಯೇದು ತಿಳಿಯೋಣ.

 

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಹತ್ತು ಲಾಭಗಳು:-

 

 • ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

 •  ರಕ್ತ ಕಣಗಳನ್ನು ಉತ್ಪತ್ತಿ ಮಾಡುವಲ್ಲಿಯೂ ಇದು ಸಹಕಾರಿ ಯಾಗುತ್ತದೆ

 • ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ಮತ್ತು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.

 • ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕರುಳಿನ ಕ್ರಿಯೆ ಸರಾಗವಾಗುತ್ತದೆ. ಬೆಳಿಗ್ಗೆ ನೀರು ಕುಡಿದ ನಂತರ ಮಲವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದಾಗಿ ದೇಹದ ಕಲ್ಮಷಗಳು ಹೊರಹೋಗಿ ದೇಹವು ತ್ಯಾಜ್ಯಮುಕ್ತವಾಗುತ್ತದೆ ಮತ್ತು ಕರುಳಿನ ಕ್ರಿಯೆಯೂ ಕೂಡ ನಿಯಮಿತವಾಗುತ್ತದೆ.

 • ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಇದು ಸೋಂಕಿನ ವಿರುಧ್ಹ ಹೋರಾಡುವುದಕ್ಕೆ ಸಹಾಯ ಮಾಡುತ್ತದೆ.

 • ರಕ್ತ ಕಣಗಳನ್ನು ಉತ್ಪತ್ತಿ ಮಾಡುವಲ್ಲಿಯೂ ಇದು ಸಹಕಾರಿಯಾಗುತ್ತದೆ

 • ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಗೆ ಮುಕ್ತಿ ಜೊತೆಗೆ ತಲೆನೋವೂ ನಿವಾರಣೆಯಾಗುತ್ತದೆ

  ಕೆಲವೊಮ್ಮೆ ನಿರ್ಜಲೀಕರಣದ (ಡೀಹೈಡ್ರೇಷನ್) ಸಮಸ್ಯೆಯಿಂದಾಗಿ ತಲೆನೋವು ಕಾಣಿಸಿಕೊಳ್ಳಬಹುದು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಆಗುತ್ತದೆ

 • ನೀರು ಕುಡಿಯುವುದರಿಂದ ದೀರ್ಘಕಾಲದ ರೋಗಗಳಿಂದ ಕೂಡ ಮುಕ್ತಿ ಹೊಂದಬಹುದು. ಮೈಕೈನೋವು, ಸಂಧಿವಾತ, ವೇಗದ ಹೃದಯದ ಬಡಿತ, ಅಸ್ತಮಾ, ಟಿಬಿ, ಮೂತ್ರಪಿಂಡ ಮತ್ತು ಮೂತ್ರ ರೋಗಗಳು ನಿಯಂತ್ರಣಕ್ಕೆ ಬರುತ್ತವೆ

 • ಬಿಸಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆಯ ವೇಗ ಸುಮಾರು 24% ಹೆಚ್ಚಾಗುತ್ತದೆ. ಇದರಿಂದ ಸೇವಿಸಿದ ಆಹಾರ ಬೇಗ ಜೀರ್ಣವಾಗುತ್ತದೆ

 • ತಂಬಾಕು ಸೇವನೆ, ಧೂಮಪಾನ, ಜಂಕ್ ಫುಡ್ ಸೇವನೆ ಮಾಡುವವರಂತೂ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದು ತುಂಬಾ ಉತ್ತಮ.

 • ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ವಾಂತಿ, ಗ್ಯಾಸ್ ಸಮಸ್ಯೆ, ಅತಿಸಾರ, ಮಧುಮೇಹ, ಮಲಬದ್ಧತೆ, ಕಣ್ಣಿನ ಸಮಸ್ಯೆ, ಕಿವಿ, ಮೂಗು ಮತ್ತು ಗಂಟಲು ಸಂಬಂಧಿತ ರೋಗಗಳು, ಮುಟ್ಟಿನ ಸಮಸ್ಯೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ