ಕೆಂಪು ಬಾಳೆಹಣ್ಣು ದೇಹಕ್ಕೆ ತುಂಬಾ ಒಳ್ಳೆಯದು ಅದರ ಉಪಯೋಗಗಳು ಇಂತಿವೆ.

                                ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿರಿಸಬಹುದು ಎಂಬುದೊಂದು ಗಾದೆ. ಆದರೆ ಭಾರತೀಯರ ಮಟ್ಟಿಗೆ ದಿನಕ್ಕೊಂದು ಬಾಳೆಹಣ್ಣು ತಿನ್ನುವ ಮೂಲಕ ವೈದ್ಯರನ್ನು ದೂರವಿಡುವುದು ಮಾತ್ರವಲ್ಲ, ಇನ್ನೂ ಹೆಚ್ಚಿನದನ್ನು ಪಡೆಯಬಹುದು. ಸರ್ವ ರೋಗಕ್ಕೂ ದಿವ್ಯೌಷಧ ಕೆಂಪು ಬಾಳೆಹಣ್ಣು,  ಹಳದಿ ಬಾಳೆ ಹಣ್ಣುಗಳಿಗಿಂತ ಕೆಂಪು ಬಣ್ಣದ ಬಾಳೆ ಹಣ್ಣುಗಳಲ್ಲಿ ಪೋಷಕಾಂಶ ಹೆಚ್ಚಿರುತ್ತದೆ. ಆದರೆ, ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ಬಾಳೆ ನಿಮ್ಮ ದೇಹಕ್ಕೆ ತುಂಬಾ ಉತ್ತಮ.

 

ಕೆಂಪು ಬಾಳೆಹಣ್ಣು ಉಪಯೋಗಗಳು ಇಂತಿವೆ.

1. ಕೆಂಪು ಬಾಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚಿದೆ. ಈ ನಾರಿನಲ್ಲಿ ಕಾರ್ಬೊಹೈಡ್ರೇಟ್‌ ಹೇರಳವಾಗಿರುತ್ತದೆ.
ಆದ್ದರಿಂದ ಅಜೀರ್ಣ, ವಾಯುಪ್ರಕೋಪ ಮುಂತಾದ ತೊಂದರೆ ಇರುವವರಿಗೆ ಕೆಂಪು ಬಾಳೆಹಣ್ಣು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

2. ಈ ಬಾಳೆಹಣ್ಣು ಕ್ಯಾಲ್ಷಿಯಂನಿಂದ ಸಂಪದ್ಭರಿತವಾಗಿರುವುದರಿಂದ ಮಕ್ಕಳು ಹಾಗು ವಯಸ್ಕರು ಇದನ್ನು ತಿಂದರೆ ಮೂಳೆಗಳು ಗಟ್ಟಿಯಾಗುತ್ತವೆ.

3. ಬಾಳೆಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಮತ್ತು ಮುಖ್ಯವಾಗಿ ಪೊಟ್ಯಾಶಿಯಂ ಮೂಲಕ ನಿತ್ಯದ ಚಟುವಟಿಕೆಗೆ ಬೇಕಾದ ಶಕ್ತಿ ದೊರಕುತ್ತದೆ. ಅಲ್ಲದೇ ಇದು ನಿಧಾನವಾಗಿ ಬಿಡುಗಡೆಯಾಗುವ ಮೂಲಕ ಹೆಚ್ಚು ಹೊತ್ತು ಆಯಾಸವಿಲ್ಲದೇ ಕೆಲಸ ನಿರ್ವಹಿಸಲು ನೆರವಾಗುತ್ತದೆ.

4. ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ
ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.

5.ಧೂಮಪಾನ ತೊರೆದ ತಕ್ಷಣ ದೇಹದ ಮೇಲೆ ಕೆಲವು ಪ್ರತಿಕೂಲ ಪರಿಣಾಮಗಳು ಬೀರುತ್ತವೆ. ಆದರೆ  ಅವುಗಳ ಪರಿಣಾಮವನ್ನು ಕಡಿಮೆ ಮಾಡಲು ಕೆಂಪು ಬಾಳೆ ಸಹಕಾರಿ

6.ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು-ಐದು ಪಟ್ಟು ಪ್ರೋಟೀನ್ ಇವೆ, ಎರಡು
ಪಟ್ಟು ಕಾರ್ಬೋಹೈಡ್ರೇಟ್ಸ್ ಇದೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ
ಇದೆ,

7. ಅನೇಕ ಚರ್ಮ ತಜ್ಞರು ಮತ್ತು ಸೌಂದರ್ಯ ವೃತ್ತಿಪರರು ಕೆಂಪು ಬಾಳೆಹಣ್ಣುನು  ಫೇಸ್ ಪ್ಯಾಕ್  ಆಗಿ ಬಳಸಲು ಸಲಹೆ ನೀಡಿದಾರೆ.

8. ಆರೋಗ್ಯ ತಜ್ಞರು ಮತ್ತು ಶಸ್ತ್ರಚಿಕಿತ್ಸಕರು ಸಲಹೆ ಪ್ರಕಾರ ನಿಮಗೆ ಸತತವಾಗಿ ಮಲಬದ್ಧತೆಯ ತೊಂದರೆ ಕಾಡುತ್ತಿದ್ದರೆ ಪ್ರತಿದಿನ
ಬಾಳೆಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಈ ತೊಂದರೆಯನ್ನು ನಿವಾರಿಸಬಹುದು