ಕಿತ್ತಳೆ ಹಣ್ಣು ಉಪಯೋಗಗಳು


   

                               ಕಿತ್ತಳೆ ಹಣ್ಣು ತನ್ನ ಹುಳಿ ಮತ್ತು ಸಿಹಿ ಮಿಶ್ರಿತ ರುಚಿಯಿಂದ ಸಾಕಷ್ಟು ಜನಪ್ರಿಯವಾಗಿದೆ. ಔಷಧೀಯ ಗುಣಗಳನ್ನು ಹೊಂದಿರುವ ಕಿತ್ತಳೆ ಮರದ ಎಲ್ಲ ಭಾಗಗಳು ನಾನಾ ಕಾಯಿಲೆಗಳನ್ನು ನಿವಾರಿಸುತ್ತದೆ.  ಮಾತ್ರವಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ ಕಿತ್ತಳೆ ವಿಟಮಿನ್ C ಜೀವಸತ್ವದ ಉತ್ತಮ ಮೂಲವಾಗಿದೆ ವಿಟಮಿನ್ ಸಿ ಯ ನಿಮ್ಮ ದೈನಂದಿನ ಅವಶ್ಯಕತೆವಾಗಿದೆ ಒಂದು ಮಧ್ಯಮ ಗಾತ್ರದ ಕಿತ್ತಳೆ ಹಣ್ಣುನು ತಿದ್ದರೆ 72% ರಷ್ಟು ವಿಟಮಿನ್ ಸಿ ನಮ್ಮಗೆ ಪಡೆದಂತಾಗುತ್ತದೆ.

 

-:ಕಿತ್ತಳೆ ಹಣ್ಣು ಉಪಯೋಗಗಳು ಇಂತಿವೆ:-

 

 • ಒಂದು ಗ್ಲಾಸು ಕಿತ್ತಳೆ ಹಣ್ಣಿನ ರಸಕ್ಕೆ ಒಂದು ಚಮಚ ಉಪ್ಪು, ಕರಿಮೆಣಸಿನ ಪುಡಿ ಹಾಕಿ ಸೇವಿಸಿದರೆ ಅಜೀರ್ಣ, ವಾಕರಿಕೆ, ವಾಂತಿ ಕಡಿಮೆಯಾಗಿತ್ತದೆ.
 • ಕಿತ್ತಳೆಹಣ್ಣಿನಲ್ಲಿ ನಾರು ಅಂಶಗಳು ಸಾಕಷ್ಟಿರುತ್ತವೆ. ಇವು ಹೊಟ್ಟೆಯ ಅಲ್ಸರ್ ರೋಗವನ್ನು ಹದ್ದುಬಸ್ತಿನಲ್ಲಿಡಲು ನೆರವಾಗುತ್ತವೆ.
 • ತಲೆಯಲ್ಲಿ ಹೊಟ್ಟಾಗಿದ್ದರೆ ಕಿತ್ತಳೆ ಹೂವುಗಳನ್ನು ತಲೆಗೆ ಉಜ್ಜುವ ಮೂಲಕ ಹೊಟ್ಟಿನಿಂದ ಬಿಡುಗಡೆ ಪಡೆಯಬಹುದು
 • ದೇಹವನ್ನು ಪ್ರವೇಶಿಸಿರುವ ಕ್ಯಾನ್ಸರ್ ಕಾರಕ ಕಣಗಳು ನಮ್ಮ ರಕ್ತದಲ್ಲಿನ ಆಮ್ಲಜನಕವನ್ನು ಕದಿಯುತ್ತವೆ.

  ಕಿತ್ತಳೆಹಣ್ಣಿನಲ್ಲಿ ಹೇರಳವಾಗಿರುವ ಸಿಟ್ರಸ್ ಲಿಮೋನಾಯ್ಡ್ ಅಂಶಗಳು ಕ್ಯಾನ್ಸರ್ ನಿಗ್ರಹ ಗುಣ ಹೊಂದಿವೆ.

  ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್ ಹೀಗೆ ಹಲವು ರೀತಿಯ ಕ್ಯಾನ್ಸರ್’ಗಳಿಗೆ ಕಿತ್ತಳೆ ಮದ್ದಾಗಿದೆ.

  ಮತ್ತು ಕಿತ್ತಳೆ ಸಿಪ್ಪೆಯಲ್ಲಿನ (ಲಿಮೋನೀನ್) ಎಂಬ ಪೋಷಕಾಂಶ ಈ ಕಣಗಳೊಂದಿಗೆ ಮಿಳಿತಗೊಂಡು ದೇಹದಿಂದ ವಿಸರ್ಜಿಸಲ್ಪಡುವುದರಿಂದ ಕ್ಯಾನ್ಸರ್ ಬರುವುದರಿಂದ ರಕ್ಷಣೆ ಪಡೆದಂತಾಗುತ್ತದೆ

 • ಕಿತ್ತಳೆಯಲ್ಲಿರುವ ನಾರಿನ ಅಂಶವು ನಮ್ಮ ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸಿ ಆರೋಗ್ಯ ಕಾಪಾಡುತ್ತದೆ.
 • ಅಜೀರ್ಣತೆ: ಕಿತ್ತಳೆ ಸೇವನೆಯಿಂದ ಅಜೀರ್ಣತೆಯ ಸಮಸ್ಯೆಯಿಂದ ಬಿಡುಗಡೆ ಆಗ ಬಹುದು.

  ಮತ್ತು ಇದು ಮಲಬದ್ದತೆಯಾಗುವುದನ್ನು ತಡೆಯುತ್ತದೆ ಸುಲಲಿತ ಮಲವಿಸರ್ಜನೆ, ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡುಬರುತ್ತದೆ.

  ಹಾಗು ದೇಹದೊಳಗೆ ಪಚನಕಾರಿ ಧ್ರವ ಸ್ರವಿಸಲು ನೆರವಾಗಿ ಆ ಮೂಲಕ ಜೀರ್ಣಶಕ್ತಿಯನ್ನು ಬಲಗೊಳಿಸುತ್ತದೆ.

 • ಕಿತ್ತಳೆಯ ಹೂವು ಮತ್ತು ಹಣ್ಣಿನಿಂದ ತಯಾರಿಸಿದ ಎಣ್ಣೆಯು ಹೊಟ್ಟೆ ಸಂಬಂಧಿತ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
 • ಕಿತ್ತಳೆಯಲ್ಲಿರುವ ನಾರಿನ ಅಂಶವು ನಮ್ಮ ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸಿ ಆರೋಗ್ಯ ಕಾಪಾಡುತ್ತದೆ

  ಕಿತ್ತಳೆ ಸಿಪ್ಪೆಗಳನ್ನು ತೆಳುವಾಗಿ ಹೆಚ್ಚಿ ನಿಮ್ಮ ಖಾದ್ಯಗಳಲ್ಲಿ ಕೊಂಚ ಪ್ರಮಾಣದಲ್ಲಿ ಸೇರಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಬಹುದು.

 • ಕಿತ್ತಳೆ ರಲ್ಲಿ ವಿಟಮಿನ್ ಎ ಕಣ್ಣುಗಳು ಆರೋಗ್ಯಕರ ಲೋಳೆಯ ಪೊರೆಗಳ ಸಹಾಯವಾಗಿದೆ