ಎಳನೀರಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ?

 ಎಳೆನೀರು ಸೇವನೆಯೂ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ದಿನಕ್ಕೊಂದು ಎಳನೀರನ್ನು ಕುಡಿಯುವ ಮೂಲಕ ಮೂತ್ರ ವರ್ಧಿಸುವ ಮೂಲಕ ದೇಹದ ಕಲ್ಮಶಗಳು ಹೊರಹಾಕಲ್ಪಟ್ಟು ಆರೋಗ್ಯ ಉತ್ತಮಗೊಳ್ಳುತ್ತದೆ ಉರಿ ಬಿಸಿಲಿನಲ್ಲಿ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳೆನೀರು ಅನೇಕ ರೋಗಗಳಿಗೆ ಮದ್ದು. ಬೇಸಗೆಯಲ್ಲೊಂದೇ ಅಲ್ಲ, ಚಳಿಗಾಲ, ಮಳೆಗಾಲ ಎನ್ನದೇ ಎಲ್ಲ ಕಾಲದಲ್ಲೂ ಇದನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಎಳೆ ನೀರನ್ನು ತಾಯಿಯ ಎದೆ ಹಾಲಿಗೆ ಹೋಲಿಸುತ್ತಾರೆ. ಆರೋಗ್ಯಪಾಲನೆ ಮತ್ತು ಚೈತನ್ಯವೃದ್ಧಿಗೆ ನೈಸರ್ಗಿಕವಾಗಿ ದೊರೆಯುವ ಶಕ್ತಿವರ್ಧಕ ಪಾನೀಯ ಎಂಬುದಾಗಿ
ಇಡೀ ವಿಶ್ವ ಇಂದು ಅರಿತಿದೆ. ಆದುದರಿಂದ ಆರೋಗ್ಯ ಸರಿ ಇರಲಿ ಅಥವಾ ಇಲ್ಲದಿರಲಿ, ಆರೋಗ್ಯದ ಬಗ್ಗೆ ಯಾರು ಹೆಚ್ಚು ಕಾಳಜಿ ಹೊಂದಿರುತ್ತಾರೋ ಅಂಥವರಿಗೆ ಇದು ನಿತ್ಯದ ಪಾನೀಯವಾಗಿದೆ. 

 

**************ಎಳನೀರಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ?************

 • ಎಳನೀರಿನಲ್ಲಿರುವ ಖನಿಜಗಳು, ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳ ಕಾರಣ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಬಹುಮಟ್ಟಿಗೆ ತಡೆಯುತ್ತದೆ
 • ಕ್ಯಾಲ್ಷಿಯಂ ಅಧಿಕವಾಗಿದೆ. ಆರೋಗ್ಯಕರ ಮೂಳೆ, ಮಾಂಸಖಂಡಗಳಿಗೆ ಇದು ಅಗತ್ಯವಾಗಿ ಬೇಕು.
 • ಇದು ಪೊಟ್ಯಾಷಿಯಂ ಅಂಶವನ್ನು ಸಮೃದ್ಧವಾಗಿ ಹೊಂದಿರುವ ಎಳನೀರು ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ಹದಿನೈದು ದಿನ ಸತತವಾಗಿ ಎಳೆನೀರು ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ಪೆಡಸಾಗಿದ್ದ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಸಂಚಾರವನ್ನು ಸುಲಲಿತಗೊಳಿಸಲು ಎಳನೀರು ನೆರವಾಗುತ್ತದೆ.
 • ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಹೋದವರ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನವನ್ನು ಕಾಪಾಡುತ್ತದೆ.
 • ಮಧುಮೇಹ ನಿಯಂತ್ರಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ.
 • ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ದೇಹದ ಜಲಾಂಶ ನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ.
 • ಹೊಟ್ಟೆ ಮತ್ತು ಕರುಳುಗಳಲ್ಲಿ ಅಜೀರ್ಣತೆಯ ಕಾರಣ ಎದುರಾಗಿದ್ದ ಆಮ್ಲೀಯತೆ ಮತ್ತು ಈ ಮೂಲಕ ಎದುರಾಗಿದ್ದ ಹೊಟ್ಟೆಯುರಿಯನ್ನು ಕಡಿಮೆಗೊಳಿಸುತ್ತದೆ.
 • ಕರುಳಿನ ಕಾರ್ಯವನ್ನು ಮತ್ತು ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಿಶುಗಳಲ್ಲಿ ಪಚನಕ್ರಿಯೆಗೆ ಯಾ ಕರುಳಿನ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ.
 • ದಿನಪೂರ್ತಿ ಲವಲವಿಕೆಯಿಂದ ಕಾರ್ಯಮಗ್ನವಾಗಿರಲು ಉಪಯುಕ್ತ.
 • ಪ್ರತಿದಿನ ಎಳೆನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಒಂದು ಘಂಟೆಯ ಬಳಿಕ ಉಪಾಹಾರ ಸೇವಿಸುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ದೇಹದ ಹೆಚ್ಚುವರಿ ತೂಕವನ್ನುಶೀಘ್ರವಾಗಿ ಕಳೆದುಕೊಳ್ಳಲು ನೆರವಾಗುತ್ತದೆ
 • ಶಕ್ತಿ ನೀಡುವ ಗುಣ ಹೊಂದಿರುವ ಎಳನೀರುನ್ನು ವ್ಯಾಯಾಮದ ನಂತರ ಸೇವನೆ ಮಾಡುವುದು ಸೂಕ್ತ, ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ
 • ಮೂತ್ರಲ ಮತ್ತು ಮೂತ್ರದಸೋಂಕನ್ನು ತಡೆಗಟ್ಟುವ ಗುಣ ಹೊಂದಿರುವ ಕಾರಣ ಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ.
 • ಎಳೆನೀರಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಇದೆ ಮತ್ತು ಪೋಟಾಶಿಯಂ ಅಂಶ ಅಧಿಕವಾಗಿದೆ. ಕ್ಯಾಲ್ಷಿಯಂ ಮತ್ತು ಕ್ಲೋರೈಡ್ ನೀರಿನ ಅಂಶವನ್ನು ಹೆಚ್ಚಿಸಿ ದೇಹವನ್ನು ಪುನರ್ ಯೌನಗೊಳಿಸುತ್ತದೆ.
 • ಎಳೆ ನೀರು ನೂರಾರು ರೋಗಗಳಿಗೆ ರಾಮಬಾಣ. ಕೃತಕ ಪಾನಿಯ ಸೇವನೆ ಬಿಟ್ಟು, ನೈಸರ್ಗಿಕವಾಗಿ ಸಿಗುವ ಈ ಎಳೆನೀರನ್ನು ಸೇವಿಸುತ್ತ ಬಂದರೆ ಪದೇ ಪದೇ ಆಸ್ಪತ್ರೆ ಮೆಟ್ಟಿಲೇರುವುದನ್ನು ತಪ್ಪಿಸಬಹುದು